- ಉದ್ಯೋಗ ಮೇಳಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿಪರಿಚಯ (ರೆಸ್ಯೂಮೆ/ಬಯೋಡಾಟಾ) ಪತ್ರದ ಕನಿಷ್ಠ ೧೦ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು.
- ವಿದ್ಯಾರ್ಹತೆಯ ಪ್ರಮಾಣ ಪತ್ರದ ಝರಾಕ್ಸ ಪ್ರತಿಗಳನ್ನು ಮಾತ್ರ ಸಾಕಷ್ಟು ಸಂಖ್ಯೆಯಲ್ಲಿ ತರಬೇಕು.
- ನಿಗದಿಪಡಿಸಿರುವ ಪ್ರವೇಶ ದ್ವಾರದ ಮುಖಾಂತರ ಉದ್ಯೋಗ ಮೇಳಕ್ಕೆ ಬಂದು ಹೆಸರನ್ನು ನೊಂದಾಯಿಸಿಕೊಳ್ಳಬೇಕು.
- ನೋಂದಣಿ ಪತ್ರದೊಂದಿಗೆ ಅಭ್ಯರ್ಥಿಗಳು ತರಬೇತಿ ವ ಮಾರ್ಗದರ್ಶನ ಸ್ಥಳಕ್ಕೆ ತೆರಳಬೇಕು.
- ಮಾರ್ಗದರ್ಶನ ಪಡೆದ ನಂತರ ಅಭ್ಯರ್ಥಿಗಳು ನೇರವಾಗಿ ಉದ್ಯೋಗದಾತರನ್ನು ಭೇಟಿಯಾಗಿ, ಸಂದರ್ಶನಕ್ಕೆ ಒಳಪಟ್ಟು ಉದ್ಯೋಗಾವಕಾಶ ಪಡೆದುಕೊಳ್ಳಬೇಕು.
- ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಆಧಾರದ ಖಾಲಿ ಹುದ್ದೆಗಳನ್ನು ಹೊಂದಿರುವ ಎಲ್ಲಾ ಉದ್ಯೋಗದಾತರನ್ನು ಭೇಟಿಯಾಗಬಹುದಾಗಿದೆ.
- ಉದ್ಯೋಗದಾತರು ತಮಗೆ ಅಗತ್ಯವಿರುವ ಉದ್ಯೋಗಾಕಾಂಕ್ಷಿಗಳನ್ನು ತಮ್ಮ ಕಂಪನಿಗಳ ನಿಯಮಾನುಸಾರ ಅರ್ಹರೆನಿಸಿದಲ್ಲಿ ನೇರವಾಗಿ ಆಯ್ಕೆ ಮಾಡಿಕೊಂಡು ಉದ್ಯೋಗ ಒದಗಿಸುತ್ತಾರೆ.
- ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಫೀ ವ ಶುಲ್ಕ ನೀಡುವ ಅವಶ್ಯಕತೆ ಇರುವುದಿಲ್ಲ ಸಂಪೂರ್ಣವಾಗಿ ಉಚಿತವಾಗಿರುತ್ತದೆ.